| anantharamesh Nov 2 | ಬೆಳ್ಳಿ ಚಂದಿರನ ಚಿನ್ನ ಸೂರ್ಯನ ಹೊಳೆವ ನಕ್ಷತ್ರಗಳ ಬೆಳಕ ಪುಂಜವ ಹಿಡಿವೆನೆಂಬ ಇಳೆಗೆ ತರುವೆನೆಂಬ ಎತ್ತಿ ಎತ್ತೆತ್ತಲೂ ಓಡಿ ಕೂಡಿ ಆಡುವೆನೆಂಬ ಹುಚ್ಚು ಬೇಡ ಬಿಡು ಬಿಡು ಭ್ರಮೆ ಅಂದರು ನಾನದನ್ನು ನಂಬಿದ್ದೆ ಓಹೋ! ಎಂಥಾ ಸುಳ್ಳು! ಮಿಥ್ಯವನೆ ಮೀರಿಸುವ ಮಾತುಗಳ ಜೊಳ್ಳು! ಇದೋ ಇಲ್ಲಿ ಕಾಣಿರಿ ನನ್ನ ಕರಗಳ ತುಂಬಿ ಹೊರಳಿ ಆಡುತ್ತ ಮರಳಿ ಹೊರಳುತ್ತ ಬೆಳಕೆ ತಳುಕಾದ ತಾರೆಯಂಥವನು ತುಳುಕಿ ಚೆಲ್ಲಿದ್ದಾನೆ ವಿಸ್ಮಯವನ್ನು ನರುಗೆಂಪಕೇಶ ಮುಡಿಯ ಫಳಫಳ ಹಣೆಯ ಹೊಳೆವ ಕಣ್ಗಳ ಮೊಗ್ಗು ಮೂಗಿನ ತುಂಟ ಹಾಲ್ಗಲ್ಲ ಚೆಲು ತುಟಿಯ ಬಂಗಾರ ಗಲ್ಲ ಯುಗಳ ಕಿವಿಯ ದಿವ್ಯ ಮುಗುಳುಮುಗುಳಿನ ಕೆನ್ನೆಗುಳಿಯವನು ಯಾವ ಮಾಯದವನಿವನು ಕಾಡುವವನು ಗಲಗಲ ನಗುವವನು ಬಳಬಳ ಅಳುವವನು ನಮ್ಮನ್ನು ಆಳುವವನು ಪ್ರೀತಿಯ ಹೊರೆ ಹೊತ್ತ ವರ್ಷ ಮುಗಿಸದ ತರಳ ಶ್ರವಿಕ ಸಾಗರದ ಭರತಕ್ಕೆ ಹುಮ್ಮಸ್ಸ ಹಡಗೇರಿಸಿ ನಮ್ಮನೊಯ್ಯುತ್ತಿರುವ ಹೊಸ ನಾವಿಕ (Pics - My grandson Shravik) | | | | | You can also reply to this email to leave a comment. | | | | |
No comments:
Post a Comment