ಚಂದ್ರನಿರದ ಕತ್ತಲ ನೀಗಿ

ಬೆಳಕು ಮೂಡಿತು ತೋರಲು ಹಾದಿ

ಋತುಗಳುರುಳಿ ಗಿಡಮರವರಳಿ

ವಸಂತ ಹಾಡಿದ ಹಕ್ಕಿ ಕೊರಳಲಿ

ಪ್ರಕೃತಿಯ ನಗುವಿಗೆ ಅದೆ ನಾಂದಿ

ಮರೆಯಲು ಕಹಿ ಒಸರಲು ಸಿಹಿ

ಹೊಸತನುಸೂಸುತ ಬಂದಿತು ಶುಭಕೃತ

ಭರವಸೆ ತುಂಬುತ ಸೊಗದ ಉಗಾದಿ